ಆಯುಧದ ಉಕ್ಕು

	ಎಲ್ಲ ವಿಧವಾದ ಆಯುಧಗಳನ್ನೂ ಕಡೆತದ ಯಂತ್ರಗಳಲ್ಲಿ (ಲೇಥ್) ಉಪಯೋಗಿಸಲು ಬೇಕಾದ ಸಣ್ಣ ಸಣ್ಣ ಆಯುಧಗಳನ್ನೂ (ಹತ್ಯಾರುಗಳು, ಬೈರಿಗೆಯ ತುಣುಕುಗಳು ಇತ್ಯಾದಿ) ತಯಾರಿಸಲು ಬಳಸುವ ವಿಶೇಷ ತರಹದ ಉಕ್ಕು. ಓಪನ್ ಹಾರ್ತ್‍ನಲ್ಲಾಗಲಿ ಬೆಸ್ಸೆಮರ್ ಮೂಸೆಯಲ್ಲಾಗಲಿ ತಯಾರಾಗುವ ಸಾಮಾನ್ಯವಾದ ಉಕ್ಕು ಮೆದು. ಇದನ್ನು ಗಟ್ಟಿಮಾಡದೆ ಆಯುಧಗಳಿಗೆ ಉಪಯೋಗಿಸಲು ಬರುವುದಿಲ್ಲ. ಇಂಗಾಲದ (ಕಾರ್ಬನ್) ಅಂಶವನ್ನು ಹೆಚ್ಚಿಸಿದರೆ ಉಕ್ಕು ಗಡಸೇನೋ (ಹಾರ್ಡ್) ಆಗುತ್ತದೆ: ಆದರೆ ಇದು ಬಹಳ ಪೆಡಸು (ಬ್ರಿಟ್‍ಲ್). ಗಡಸಿನ ಜೊತೆಗೆ ಕಠಿಣವಾಗಿಯೂ (ಟಫ್) ಇರಬೇಕು. ಇವೆರಡು ಗುಣಗಳು ಬರಲು ಇಂಗಾಲದ ಅಂಶವನ್ನು ಹೆಚ್ಚು ಮಾಡುವುದರ ಜೊತೆಗೆ ಕೆಲವು ವಿಶೇಷವಾದ ಲೋಹಗಳನ್ನು ನಿರ್ದಿಷ್ಟ ಪ್ರಮಾಣಗಳಲ್ಲಿ ಬೆರೆಸುತ್ತಾರೆ. ಸಾಮಾನ್ಯವಾಗಿ ಕ್ರೋಮಿಯಂ, ನಿಕ್ಕಲ್, ವೆನೇಡಿಯಂ, ಮಾಲಿಬ್ಡೆನಂ ಮತ್ತು ಟಂಗ್‍ಸ್ಟನ್ ಎಂಬ ಲೋಹಗಳನ್ನು ಬೆರೆಸುತ್ತಾರೆ. ಎಷ್ಟೆಷ್ಟು ಪ್ರಮಾಣಗಳಲ್ಲಿ ಇವನ್ನು ಬೆರೆಸಬೇಕೆಂಬುದು ಆಯುಧದ ಉಪಯೋಗದ ಆವಶ್ಯಕತೆಗಳ ಮೇಲೆ ಅವಲಂಬಿಸಿದೆ. ಆಯುಧದ ಉಕ್ಕುಗಳಲ್ಲಿ ಸಾವಿರಾರು ವಿಭಾಗಗಳಿವೆ. ಮುಖ್ಯವಾದ ಕೆಲವು ಉಕ್ಕುಗಳ ವಿಶ್ಲೇಷಣೆಯನ್ನು ಇಲ್ಲಿ ಕೊಡಲಾಗಿದೆ.

ಮಿಶ್ರಣ ವಸ್ತುಕ್ರೋಮಿಯಂ ಉಕ್ಕುಕ್ರೋಮಿಯಂ ವೆನೇಡಿಯಂಕ್ರೋಮಿಯಂ ನಿಕ್ಕಲ್ ಉಕ್ಕುಕ್ರೋಮಿಯಂ ಮಾಲಿಬ್ಡೆನಂಕಾರ್ಬನ್% 	...0.9-1.10.5-1.00.4-0.750.4-0.75ಮ್ಯಾಂಗನೀಸ್	...0.250.250.400.40ಕ್ರೋಮಿಯಂ%	...1.0-2.00.75-1.50.75-2.250.75-1.50ವೆನೇಡಿಯಂ%	...__0.20____ನಿಕ್ಕಲ್%		...____1.0-2.01.0-2.0ಮಾಲಿಬ್ಡೆನಂ%	...______0.2-0.5

	ಮೇಲ್ಕಂಡ ಆಯುಧದ ಉಕ್ಕುಗಳನ್ನು ಮೂಸೆಯಿಂದ ಹೊರಬಂದು ಅಚ್ಚಾದ ಮೇಲೆ ಒಂದು ವಿಶೇಷವಾದ ಉಷ್ಣಸಂಸ್ಕಾರಕ್ಕೆ (ಹೀಟ್ ಟ್ರೀಟ್‍ಮೆಂಟ್) ಒಳಪಡಿಸಲಾಗುವುದು. ಪರಿಣಾಮವಾಗಿ ಅವುಗಳಿಗೆ ಬೇಕಾದ ವಿಶೇಷ ಗುಣಗಳು ಬರುತ್ತವೆ. ಮಿಶ್ರಲೋಹಗಳ ಪ್ರಮಾಣದ ಮೇಲೆಯೂ ಇಂಗಾಲ ಅಂಶದ ಮೇಲೆಯೂ ಅವಲಂಬಿಸಿ ಈ ಉಷ್ಣಸಂಸ್ಕಾರಗಳೂ ಸ್ವಲ್ಪ ಸ್ವಲ್ಪ ವ್ಯತ್ಯಾಸವಾಗುತ್ತದೆ. ಸಾಮಾನ್ಯವಾಗಿ ಈ ತರಹದ ಉಕ್ಕನ್ನು ಚೆನ್ನಾಗಿ ಕೆಂಪಗೆ ಕಾಯಿಸಿ ತಕ್ಷಣ ಅದನ್ನು ನೀರಿನಲ್ಲಾಗಲಿ ಎಣ್ಣೆಯಲ್ಲಾಗಲಿ ಅದ್ದಿ ತಣ್ಣಗೆಮಾಡಿ (ಕ್ವೆಂಚಿಂಗ್) ಆಮೇಲೆ ಪುನಃ ಅವುಗಳನ್ನು ಸುಮಾರು 1200-2200 ಸೆಂ.ಗ್ರೇ.ವರೆಗೆ ನಿಧಾನವಾಗಿ ಕಾಯಿಸಿ, ನಿಧಾನವಾಗಿ ಆರಿಸಬೇಕು (ಹದಗೊಳಿಸುವಿಕೆ, ಟೆಂಪರಿಂಗ್). ಇಂಥ ಲೋಹ ಉಪಯೋಗಕ್ಕೆ ಸಿದ್ಧವಾಗುವುದು.

	ಆಯುಧದ ಉಕ್ಕುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಅತಿವೇಗದ ಉಕ್ಕು (ಹೈಸ್ಪೀಡ್ ಸ್ಟೀಲ್). ಕೆಲವು ವಿಶೇಷ ಉಕ್ಕಿನಿಂದ ತಯಾರಿಸಲ್ಪಟ್ಟ ಯಂತ್ರಭಾಗಗಳನ್ನು ಕತ್ತರಿಸಲು, ನುಣುಪು ಮಾಡಲು ಸಾಮಾನ್ಯವಾದ ಆಯುಧದ ಉಕ್ಕು ಸಮರ್ಥವಲ್ಲ. ಸ್ವಲ್ಪಹೊತ್ತಿನಲ್ಲಿಯೇ ಆಯುಧ ಕೆಂಪಾಗಿ ತುದಿ ಮೆತ್ತಗಾಗಿ ಕೆಲಸವೇ ನಿಂತುಹೋಗುವುದು. ಕೆಲಸ ನಡೆಯುತ್ತಿರುವಾಗ ಉತ್ಪತ್ತಿಯಾಗುವ ಉಷ್ಣದಿಂದ ಕೆಂಪಾಗಿರುವಾಗಲೂ ತನ್ನ ಕಾಠಿಣ್ಯ ಕಳೆದುಕೊಳ್ಳದ ಒಂದು ತರಹದ ಉಕ್ಕು ಆವಶ್ಯ. ಇದೇ ಅತಿವೇಗದ ಉಕ್ಕು. ಇದನ್ನು ಸಾಮಾನ್ಯವಾಗಿ 18 : 4 : 1 ಉಕ್ಕು ಎಂದು ಕರೆಯುವುದು ವಾಡಿಕೆ. ಇದರಲ್ಲಿ ಕಾರ್ಬನ್ 0.5%-0.8%, ಮ್ಯಾಂಗನೀಸ್ 0.25%, ಟಂಗ್‍ಸ್ಟನ್ 18%, ಕ್ರೋಮಿಯಂ 4%, ವೆನೇಡಿಯಂ 1% ಇರುತ್ತವೆ. ಇದರಲ್ಲಿಯೂ ಈ ಮಿಶ್ರಲೋಹಗಳ ಪ್ರಮಾಣಗಳನ್ನು ಆವಶ್ಯಕತೆಗೆ ತಕ್ಕಂತೆ ಬದಲಾಯಿಸಬಹುದು. ಇದನ್ನು ವಿಶೇಷವಾಗಿ ಉಷ್ಣs ಸಂಸ್ಕಾರ ಆವಶ್ಯಕ. ಅದನ್ನು ಸಾಮಾನ್ಯವಾಗಿ 11750-13200 ಸೆಂ.ಗ್ರೇ.ವರೆಗೆ ಕಾಯಿಸಿ ಎಣ್ಣೆಯಲ್ಲಾಗಲಿ ಅಥವಾ ವಿಶೇಷವಾದ ದ್ರವ ಪದಾರ್ಥಗಳಲ್ಲಾಗಲಿ ಅದ್ದಿ ವಾತಾವರಣದ ಉಷ್ಣತೆಗೆ ಇಳಿಸಿ ಅದನ್ನು ಪುನಃ ಸುಮಾರು 5400-5950 ಸೆಂ.ಗ್ರೇ. ವರೆಗೆ ಕಾಯಿಸಿ ನಿಧಾನವಾಗಿ ಆರಿಸುತ್ತಾರೆ. ಮೂರನೆಯ ಬಾರಿ ಪುನಃ ಸುಮಾರು 3200-345 ಸೆಂ.ಗ್ರೇ.ವರೆಗೆ ಕಾಯಿಸಿ ನಿಧಾನವಾಗಿ ಆರಿಸುತ್ತಾರೆ.				   
 (ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ